'ಬಿಗ್ ಬಾಸ್' ಮನೆಯಲ್ಲಿ ಎಲ್ಲರಿಗೂ ಕಿರಿಕಿರಿ ಕೊಡುವುದರಲ್ಲಿ ಆಂಡ್ರ್ಯೂ ಅಲಿಯಾಸ್ ಆಂಡಿ ನಂಬರ್ 1. ಟಾಸ್ಕ್ ಗಳಲ್ಲಂತೂ ಉಗ್ರ ರೂಪ ತಾಳುವ ಆಂಡಿ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಉರ್ಕೊಳ್ಳೋರು ಒಬ್ಬಿಬ್ಬರಲ್ಲ. ಕಿಚ್ ಸುದೀಪ್ ರಿಂದಲೂ ಕ್ಲಾಸ್ ತೆಗೆದುಕೊಂಡಿರುವ ಆಂಡಿ ಒಂದ್ಕಾಲದಲ್ಲಿ ಡಿಪ್ರೆಶನ್ ಗೆ ಹೋಗಿದ್ದರು ಅನ್ನೋದು ನಿಮಗೆ ಗೊತ್ತಾ.? ಹೌದು, ಹತ್ತನೇ ಕ್ಲಾಸ್ ಮುಗಿದ್ಮೇಲೆ, ಆಂಡ್ರ್ಯೂ ಎರಡುವರೆ ವರ್ಷಗಳ ಕಾಲ ಡಿಪ್ರೆಶನ್ ನಲ್ಲಿದ್ದರು.